ಆಸೆಯ ಬಲೆ- ಇದು ೧೯೮೭ ನೇ ಇಸ್ವಿಯ ಕನ್ನಡ ಚಲನಚಿತ್ರ . ಇರಲಿ ವಿಷ್ಣುವರ್ಧನ್, ನಳಿನಿ, ಜೈಜಗದೀಶ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಚಿತ್ರಗೀತೆಗಳನ್ನು ಚಿ. ಉದಯಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ. ಈ ಚಿತ್ರವು ಬೆಂಗಾಲಿ ಭಾಷೆಯ ಕಥೆಯಾಧಾರಿತ ಹಿಂದಿ ಚಲನಚಿತ್ರ 'ದೋ ಆಂಜಾನೇ' ಯ ರೀಮೇಕ್ ಆಗಿದೆ. == ಪಾತ್ರವರ್ಗ == ವಿಷ್ಣುವರ್ಧನ್ ನಳಿನಿ ಜೈಜಗದೀಶ್ ಲೋಕನಾಥ್ ದಿನೇಶ್ ಸೀತಾರಾಮ್ ಲಕ್ಷ್ಮಣ್ ಶಾಂತಮ್ಮ ಉಮೇಶ್ ಸಾಯಿಕುಮಾರ್ ಮಾಸ್ಟರ್ ನಿರ್ಮಲ್ ಮಾಸ್ಟರ್ ಅರ್ಜುನ್ == ಚಿತ್ರಗೀತೆಗಳು == ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಐದು ಗೀತೆಗಳಿವೆ.